ಅಮ್ಮಾ...
ಈ ಜನ್ಮದಲ್ಲಿ ನಿನ್ನ ಋಣವ ತೀರಿಸಲು ಸಾಧ್ಯವಿಲ್ಲ.
ನನಗೆ ನೀನು ಬರೀ ತಾಯಿಯಾಗಿರದೆ, ಓರ್ವ ಒಳ್ಳೆಯ ಸ್ನೇಹಿತೆಯಾಗಿ, ಉತ್ತಮ ಸಲಹೆಗಾರ್ತಿಯಾಗಿ, ಜೀವನದಲ್ಲಿ ಅದ್ಭುತ ಆದರ್ಶಗಳನ್ನು ಕಲಿಸಿರುವೆ ಅಮ್ಮಾ...
ಹುಟ್ಟಿನಿಂದಲೂ ನಿನ್ನನ್ನೇ ಅನುಸರಿಸುತ್ತ ಬಂದಿರುವ ನನಗೆ ನೀನೇ ಸ್ಪೂರ್ತಿ ಅಮ್ಮಾ...
ಮನಸಾಗುತ್ತಿದೆ, ನಿನ್ನ ಮಡಿಲಿನಲ್ಲಿ ಇನ್ನೂ ಮಗುವಾಗಿ ಮಲಗಬೇಕೆಂದು, ಆದರೆ ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರುವಾಗ ಕೆಲವೊಂದು ಹೊಸ ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕೆಂದು ನೀನೇ ಹೇಳಿರುವೆ ಅಲ್ಲವೇ ಅಮ್ಮಾ...
ಬೆಟ್ಟದಷ್ಟು ಪ್ರೀತಿ ಕೊಟ್ಟು ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದಕ್ಕೆ ನಿನಗೆ ನಾನು ಅಭಾರಿಯಾಗಿರುವೆ ಅಮ್ಮಾ...
ಲವ್ ಯು ಅಮ್ಮಾ...
~PRN
Comments
Post a Comment