ಮಹಾಭಾರತದ ನೈಜ ನಾಯಕ ವಿದುರ - ಜಗದೀಶಶರ್ಮಾ ಸಂಪ
ಮಹಾಭಾರತದ ನೈಜ ನಾಯಕ ವಿದುರ - ಜಗದೀಶಶರ್ಮಾ ಸಂಪ
ನೀತಿ, ನಿಯತಿ, ನಿಯತ್ತು ಭಿನ್ನ ಸಂಗತಿಗಳು. ಈ ಮೂರುಗಳ ಸಮ್ಮಿಲನದ ಸಾಕಾರಮೂರ್ತಿಯಂತಿದ್ದವ ವಿದುರ. ಚಿಂತಕ, ವಾಗ್ಮಿ, ಜ್ಞಾನಿ, ದೂರದೃಷ್ಟಿಯುಳ್ಳವ, ಎಲ್ಲರ ಹಿತೈಷಿ ಆತ. ತನ್ನವರಲ್ಲಿಗೆ ಹೋಗಲಾಗದೆ, ಜೊತೆಗಿದ್ದವರನ್ನು ಸನ್ಮಾರ್ಗಕ್ಕೆ ತರಲಾಗದೆ ಇಕ್ಕಟ್ಟಿನಲ್ಲೇ ಜೀವನ ಕಳೆದ ಯಮ-ಅಂಶಿ.
ಮಹಾಭಾರತದಲ್ಲಿ ಪ್ರಮುಖನಾದ ವಿದುರನನ್ನು ಪ್ರಧಾನವಾಗಿಟ್ಟುಕೊಂಡು ಸಂಪರು ಕಥೆಯನ್ನು ಪುನಃ ಉಚ್ಚರಿಸಿದ್ದಾರೆ. ಯಮನಿಂದ ಪ್ರಾರಂಭವಾಗುವ ಕಥೆಯು ಆತ ಹೇಗೆ ಮಹಾಭಾರತವನ್ನು ಎರಡು ಪ್ರಮುಖ ಪಾತ್ರಗಳ ಮೂಲಕ ಪ್ರವೇಶಿಸುತ್ತಾನೆ ಎಂಬ ಪೀಠಕೆಯನ್ನಿಡುತ್ತದೆ, ಒಂದು ಧರ್ಮರಾಜ, ಎರಡು ವಿದುರ.
ಪುಸ್ತಕದುದ್ದಕ್ಕೂ ವಿದುರನ ಹುಟ್ಟು, ಬಾಲ್ಯ, ಯೌವ್ವನ, ಮುಪ್ಪು ಎಲ್ಲವನ್ನೂ ಚಿಕ್ಕದಾಗಿ ಕಾಣಬಹುದು. ವಿದುರನ ಅಪಾರ ಜ್ಞಾನಭಂಡಾರದ ಅನಾವರಣವನ್ನು ಆತ ಹಾಗು ದೃತರಾಷ್ಟ್ರರ ಸಮಾಲೋಚನೆಗಳಲ್ಲಿ ನೋಡಬಹುದು. ಆತ ಹೇಳುವ ಗತಕಾಲದ ಚರಿತೆಗಳು, ಪ್ರಸ್ತುತ ವಿದ್ಯಾಮಾನಗಳು ಎಲ್ಲವೂ ಅಚ್ಚುಕಟ್ಟಾಗಿದ್ದರೂ, ಪಾಲಿಸಲು ಸೂಕ್ತವಾಗಿದ್ದರೂ ಅವನ್ನು ಅಲ್ಲಗಣಿಸುವ ಕೌರವರು ದಡ್ಡರೇ ಸರಿ.
ಒಟ್ಟಿನಲ್ಲಿ, ಅದ್ಭುತ ಪಾತ್ರ ಪರಿಚಯ!
.
.
.
.
.
.
.
.
Read for life!
Comments
Post a Comment