ಒಂದು ಸೋಜಿಗ...
ಕೊಂಚ ದಣಿದು,
ಅಲ್ಪ ಸ್ವಲ್ಪ ಕಲಿತು,
ಬೆನ್ನಿಗೊಂದು ಚೀಲ ಹೊತ್ತು,
ಮನೆಯತ್ತ ಜಿಗಿಯುತ,
ಏನೋ ಸೋಜಿಗವ ಕಂಡವನಂತೆ,
ಹೊಲದ ಹಾಳೆಯಲಿ ಕೂತುಬಿಟ್ಟ ತಿಮ್ಮ...
ಕಂಡದ್ದೇನೆಂದು ಕೇಳುವಿರಾ?
ಅದೇ ರೈತ ಮಿತ್ರ ಎರೆಹುಳ.
ಎಂದೂ ಕಾಣದ ವಿಚಿತ್ರ ಜೀವಿ ಎಂಬಂತೆ,
ನಿಬ್ಬೆರಗಾಗಿ ನೋಡುತ ನಿಂತುಬಿಟ್ಟ ತಿಮ್ಮ...
ಕೌತುಕವ ತಡೆಯಲಾಗದೆ,
ಮನೆಯೆಡೆಗೆ ಅಮ್ಮಾ ಎನ್ನುತ್ತಾ ಓಡಲು,
ಬಂದವನೆ ಅಮ್ಮನ ಕೈ ಹಿಡಿದು,
ಹೊಲದೆಡೆಗೆ ಕರೆದೊಯ್ದನು ತಿಮ್ಮ...
ಪುಟ್ಟ ಹುಡುಗನ ಅಚ್ಚರಿಯ ಕಂಡು,
ನಗುವಿನ ಸರೋವರವಾದಳು ಅಮ್ಮ,
ಹುಳದ ಬಗ್ಗೆ ತಿಳಿಸಿದ ಅಮ್ಮನೊಡನೆ,
ಮನೆಯತ್ತ ತೆರಳಿದ ತಿಮ್ಮ...
~PRN
Comments
Post a Comment