ಇತಿಹಾಸ ಪ್ರಸ್ತುತ...

ಅಂದು ರಾಮನಿಗಾಗಿ, ಆತನನ್ನು ಒಮ್ಮೆ ಕಾಣಲು, ಶಬರಿ ತನ್ನ ಮುಪ್ಪಿನ ಅಂಚಿನಲ್ಲಿಯೂ ಕಾದಳು,
ರಾಮ ಬಂದದ್ದಂತೂ ಹೌದು, ಆದರೆ ಭೇಟಿಯಾದ ಕೆಲವೇ ಕ್ಷಣಗಳಲ್ಲಿ ಶಬರಿ ಪ್ರಾಣತ್ಯಾಗಮಾಡಿ ಮುಕ್ತಿಹೊಂದಿದಳಲ್ಲವೇ?
ಮುಖಪರಿಚಯವೇ ಇಲ್ಲದೆ, ಕೇವಲ ಲೀಲೆಗಳನ್ನು ಕೇಳ್ಪಟ್ಟು, ರುಕ್ಮಿಣಿ ಕೃಷ್ಣನಿಗಾಗಿ ಹಾತೊರೆದಳು,
ಕೃಷ್ಣ-ರುಕ್ಮಿಣಿಯರ ವಿವಾಹವಾದದ್ದು ನಿಜ, ಆದರೆ ಐಹಿಕದ ಆಚೆಗೂ ಅಸ್ತಿತ್ವವಿರುವಂತೆ, ಕೃಷ್ಣನ ಸರ್ವಸ್ವ ರಾಧೆಯಿಂದಲೇ ಅಲ್ಲವೇ?

ಆಸೆಯೊಂದಿತ್ತು ರಾಮ-ಸೀತೆಯರಂತೆ ಎಂತಹ ಕಷ್ಟಕರ ಪರಿಸ್ಥಿತಿಯಲ್ಲಿಯೂ ಒಬ್ಬರಿಗೊಬ್ಬರಾಗಬೇಕೆಂದು,
ಸ್ಪಷ್ಟ ಕಾರಣ ಹೇಳದೇ, ಜನರ ನುಡಿಗಳಿಗೆ ಹೆದರಿ, ಪರಿತ್ಯಜಿಸಿದೆ ನನ್ನನ್ನು ನೀನು ಆ ರಾಮಾನಂತೆ!
ಆಸೆಯೊಂದಿತ್ತು ರಾಧೆಯಂತೆ ನಿನ್ನ ಸುತ್ತುವರಿದು ಪ್ರೀತಿಯ ದಿವ್ಯ ಅನುಭವವನ್ನು ಜಗಕೆ ಪಸರಿಸಬೇಕೆಂದು,
ಮುಂದುವರಿಯುತ್ತ ತಿಳಿದದ್ದೇನೆಂದರೆ ಕೃಷ್ಣ ರಾಧೆಯನ್ನು ವಿವಾಹವಾಗದಿರಲು ಕಾರಣ ಓರ್ವ ಮುನಿಯ ಶಾಪವಂತೆ!

Comments

Popular posts from this blog

We were never meant to be - Palle Vasu

Rudra Nandini - M Lovely

ಮಹಾಭಾರತದ ನೈಜ ನಾಯಕ ವಿದುರ - ಜಗದೀಶಶರ್ಮಾ ಸಂಪ