ಮಳೆಯಲ್ಮಿಂದ ಇಳೆ
ಮಳೆಯಲ್ಮಿಂದ ಇಳೆ
ಬೇಸಿಗೆಯ ಶಾಖಕ್ಕೆ ಬಾಯ್ತೆರೆದ ಭೂಮಿಯು ಮೊದಲ ಮಳೆಗೆ ನೆನೆದು, ಹಿಗ್ಗಿ, ಸಂಪಾಗಿ ತಣಿದು, ತಂಪೆರೆಯುತ್ತಾ ಸೂಸುವ ಕಂಪನ್ನು ಹೊಗಳಲು ಶಬ್ಧಗಳೇ ಸಾಲದು!ವರುಣಾರ್ಭಟವು ಉತ್ತುಂಗಕ್ಕೇರಿದ ಒಂದು ದಿನ, ಹಾಗೆಯೇ ನಮ್ಮಲ್ಲಿನ ಹಸಿರು ಸಂಪತ್ತನ್ನು ಸವಿಯುವ ಎಂದು ಹೊರಹೊರಟಾಗ ಎದುರಾದದ್ದು, ಅನುಭವಿಸಿದ್ದು ಅಕ್ಷರಷಃ ಬೆಲೆ ಕಟ್ಟಲಾಗದಷ್ಟು ನೆಮ್ಮದಿ. ಈ ನೋಟವು ಶಹರ ಜೀವನದ ಗೋಜಿಗೆ ಸಿಕ್ಕು, ಹೈರಾಣಾದ ಮನಸ್ಸಿಗೆ ಮುಲಾಮಿನಂತಿತ್ತು. ಕೈ ಕೆಸರಾದರೂ, ಮನಕೇನೋ ಸಮಾಧಾನವಿತ್ತು...
Comments
Post a Comment