ಕರ್ವಾಲೊ - ಕೆ. ಪಿ. ಪೂರ್ಣಚಂದ್ರ ತೇಜಸ್ವಿ

ಕರ್ವಾಲೊ - ಕೆ. ಪಿ. ಪೂರ್ಣಚಂದ್ರ ತೇಜಸ್ವಿ 

ಒಳ್ಳೆ ಮಲೆನಾಡ ದಿನಚರಿಯ ದರ್ಶನವಾಯಿತು ಈ ಪುಸ್ತಕದ ಮುಖೇನ! ಬೆಳ್ಳಂಬೆಳಿಗ್ಗೆ ಏಳುವುದರಿಂದ ಹಿಡಿದು, ರಾತ್ರಿ ಮಲಗುವವರೆಗೂ ಅಲ್ಲಿನ ಜನಜೀವನದಲ್ಲಿ ಏನೆಲ್ಲಾ ನಡೆಯುತ್ತದೆಯೋ, ಎಲ್ಲವನ್ನೂ ಚುರುಕಾಗಿ ಲೇಖಕರು ಚಿತ್ರಿಸಿದ್ದಾರೆ. 

ಲೇಖಕರ ಜೇನುತುಪ್ಪದ ಹುಡುಕಾಟದಿಂದ ಶುರುವಾಗುವ ಕತೆಯಲ್ಲಿ, ಅನೇಕ ಅಮಾಯಕ ಪಾತ್ರಗಳನ್ನು ಕಾಣಬಹುದು. ಜೇನು, ಜೇನುತುಪ್ಪಗಳಲ್ಲಿನ ವೈವಿಧ್ಯಗಳನ್ನು ಮೊದಲಿಗೆ ಓದುಗರ ಮುಂದಿಡುತ್ತಾ, ಮಂದಣ್ಣನ ತಾಪತ್ರಯ ಮುಗಿದು, ನಂತರ ಹಾರಾಡುವ ಓತಿಯ ಅನ್ವೇಷಣೆಯೆಡೆಗೆ ಸಾಗುವ ಲೇಖಕ ಮತ್ತು ಸಂಗಡಿಗರು ಏನೆಲ್ಲಾ ಎದುರಿಸಬೇಕಾಗಿ ಬಂತು ಎಂಬಲ್ಲಿಗೆ ಕತೆಯು ತಿರುವನ್ನು ಪಡೆದುಕೊಳ್ಳುತ್ತದೆ. 

ಎಲ್ಲಾ ಪಾತ್ರಗಳಲ್ಲಿ ನನಗಚ್ಚುಮೆಚ್ಚು ಕಿವಿ, ಅದರ ಬುದ್ಧಿವಂತಿಕೆ! ಕೊನೆಯವರೆಗೂ ಕುತೂಹಲ ಮೂಡಿಸುವ ಕತೆ...
.
.
.
.
.
.
.
.
Read for life!

Comments

Popular posts from this blog

We were never meant to be - Palle Vasu

Rudra Nandini - M Lovely

ಮಹಾಭಾರತದ ನೈಜ ನಾಯಕ ವಿದುರ - ಜಗದೀಶಶರ್ಮಾ ಸಂಪ