ಮಹಾಭಾರತ ಅನುಸಂಧಾನದ ಭಾರತಯಾತ್ರೆ - ಲಕ್ಷ್ಮೀಶ ತೋಳ್ಪಾಡಿ

ಮಹಾಭಾರತ ಅನುಸಂಧಾನದ ಭಾರತಯಾತ್ರೆ - ಲಕ್ಷ್ಮೀಶ ತೋಳ್ಪಾಡಿ 

ವಿಮರ್ಶೆಯ ಭಂಗಿಯಲ್ಲಿ ಆರಂಭಗೊಳ್ಳುವ ಪುಸ್ತಕವು, ಅನೇಕರು ಬರೆದ ಮಹಾಭಾರತದ ವ್ಯಾಖ್ಯಾನಗಳನ್ನು ಬಿಚ್ಚಿಡುತ್ತದೆ. ಅವು ಇಂತಿವೆ:
1. ಕುಮಾರವ್ಯಾಸ/ಗದುಗಿನ ನಾರಣಪ್ಪ ಬರೆದ ಕೃಷ್ಣ ಪ್ರಧಾನವಾದ 'ಕುಮಾರವ್ಯಾಸ ಭಾರತ' ಅಥವಾ 'ಕರ್ಣಾಟ ಭಾರತ ಕಥಾಮಂಜರಿ'.
2. ಪಂಪನಿಂದ ರಚಿತ 'ವಿಕ್ರಮಾರ್ಜುನ ವಿಜಯ'; ರಾಜ ಅರಿಕೇಸರಿಯನ್ನು ಅರ್ಜುನನೊಂದಿಗೆ ಹೋಲಿಸಿ ಬರೆದದ್ದು.
3. ಕ್ಷೇಮೇನ್ದ್ರ ಹೊರತಂದ 'ಭಾರತಮಂಜರಿ'.

ಮುಂದುವರೆಯುತ್ತಾ ಮಹಾಭಾರತವು ೩ ಆವೃತ್ತಿಗಳಲ್ಲಿ, ೩ ಸಂಧರ್ಭಗಳಲ್ಲಿ ಪ್ರಕಟಗೊಂಡ ವಾಂಗ್ಮಯ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
1. ಕೃಷ್ಣದ್ವೈಪಾಯನ ವ್ಯಾಸರು ಹೇಳಿ ಬರೆಯಿಸಿ ತಮ್ಮ ಶಿಷ್ಯನಾದ ವೈಶಂಪಾಯನನಿಗೆ ಓದಿಸಿದುದು ಗುರು ಶಿಷ್ಯ ಸಂಧರ್ಭ/ಆಧ್ಯಾತ್ಮಿಕ ಸಂಧರ್ಭ.
2. ಜನಮೇಜಯ ನಡೆಸಿದ ದಾರುಣವಾದ ಸರ್ಪಯಾಗದ ನಡುವಿನ ಬಿಡುವಿನಲ್ಲಿ, ವ್ಯಾಸರ ಸೂಚನೆಯಂತೆ ವೈಶಂಪಾಯನನು ಹೇಳಿದ ಭಾರತಸಂಹಿತೆಯದು ಸಾಮಾಜಿಕ ಸಂಧರ್ಭ.
3. ಸಾಮಾಜಿಕ ಸಂದರ್ಭದ ಪಠಣವ ಕೇಳಿದ ಸೂತಪುರಾಣಿಕ ಕೆಲಕಾಲಾನಂತರ ಶೌಕನಾದಿ ಮಹರ್ಷಿಗಳಿಗೆ ಮೂರನೇ ಸಲ ಪ್ರವಚನ ಮಾಡಿದುದು ಸಾಂಸ್ಕೃತಿಕ ಸಂದರ್ಭ.

ಕೊನೆಯಲ್ಲಿ ಕಾಣಬಹುದು ತೋಳ್ಪಾಡಿಯವರ ನೆಚ್ಚಿನ ವ್ಯಾಖ್ಯಾನವನ್ನು, ಅದುವೇ ವ್ಯಾಸರಚಿತ ಮೂಲ ಮಹಾಭಾರತ. ಹುಟ್ಟಿನಿಂದಲೂ ಒಂದಲ್ಲ ಒಂದು ಕಾರಣಗಳಿಂದ ಮರುಗುತ್ತಾ ಬಂದ, ಜಗದ ಸುಖ ದುಃಖಗಳಿಗೆ ಕಿವಿಗೊಡುತ್ತ ಮುಂದುವರಿದ, ಸಶರೀರನಾಗಿ ಸ್ವರ್ಗ ಪ್ರವೇಶಿಸಿದ ಧರ್ಮರಾಜನೇ ವ್ಯಾಸರ ಕಥಾನಾಯಕ.

ಆಂತರಿಕ ವಿಮರ್ಶೆಗೆ ಹೇಳಿ ಮಾಡಿಸಿದ ಪುಸ್ತಕ. ಓದುವ ಮೊದಲು ಮೂಲ ಮಹಾಭಾರತದ ತಿಳುವಳಿಕೆ ಅತ್ಯಗತ್ಯ, ಇಲ್ಲದಿದ್ದಲ್ಲಿ ಪುಟಗಳಲ್ಲಿನ ಪದಗಳು ತಲೆಯ ಹೊಕ್ಕವು...

.
.
.
.
.
.
.
.

Read for life!

Comments

Popular posts from this blog

We were never meant to be - Palle Vasu

ಹೆಣ್ಣೆಂದರೆ...?!

The Palace of Illusions - Chitra Banerjee Divakaruni