ಮಹಾಭಾರತ ಹೇಳಿಯೂ ಹೇಳದ್ದು - ಜಗದೀಶಶರ್ಮಾ ಸಂಪ
ಮಹಾಭಾರತ ಹೇಳಿಯೂ ಹೇಳದ್ದು - ಜಗದೀಶಶರ್ಮಾ ಸಂಪ
ಮಹಾಭಾರತ ಸಾಮಾನ್ಯ ಎಲ್ಲರಿಗೂ ಎಳ್ಳಷ್ಟಾದರೂ ತಿಳಿದಿರುತ್ತದೆ. ಆದರೆ ಅದರಲ್ಲಿ ಬರುವ ಒಂದೊಂದು ದೃಷ್ಟಾಂತದ ಹಿಂದಿನ ಕಥೆಯೇನು ಎಂದು ತಿಳಿದಿರುವುದು ವಿರಳ. ಈ ಪುಸ್ತಕದ ಮುಖಾಂತರ ಸಂಪರು ಅಂತಹ ಹಿನ್ನೆಲೆಗಳನ್ನು ತಿಳಿಸಿಕೊಡುವ ಪ್ರಯತ್ನ ಮಾಡಿದ್ದಾರೆ.
ಈ ಅಕ್ಷರ ಖನಿಜವು ಅಂತಹ ೧೫ ಕಥೆಗಳನ್ನು ಒಳಗೊಂಡಿದೆ:
೧. ಸ್ವರ್ಗದಲ್ಲಿ ತನ್ನವರು ಕಾಣದಾದಾಗಿನ ಯುಧಿಷ್ಠಿರನ ದಿಗಿಲು
೨. ಧರ್ಮರಾಯನ ಸಜೀವ ಸ್ವರ್ಗ ಪ್ರವೇಶ
೩. ಯಾದವರ ವಿನಾಶದ ಕಥೆ
೪. ಅಶ್ವತ್ಥಾಮನ ನಿರ್ಜೀವ ಜೀವನ
೫. ಧೃಷ್ಟದ್ಯುಮ್ನನ ಜೀವಿತದ ಕೊನೆಯ ಕ್ಷಣ
೬. ದ್ರೋಣರು ಅಪೇಕ್ಷಿಸಿದ ಗುರುದಕ್ಷಿಣೆ
೭. ದ್ರುಪದನ ಪುತ್ರಕಾಮೇಷ್ಠಿ ಯಾಗ
೮. ಶಾಪಗ್ರಸ್ಥನಾದ ದಾನಶೂರ ಕರ್ಣ
೯. ಹಿರಿಯಣ್ಣನಿಗೆ ದರ್ಪಣವಿತ್ತ ಪಾಂಡವರು
೧೦. ಪಾಂಡುವಿನ ಅಕಾಲಿಕ ಮರಣ
೧೧. ಯಮನನ್ನೇ ಶಿಕ್ಷಿಸಿದ ಮಾಂಡವ್ಯಮುನಿ
೧೨. ವಸುಗಳಲ್ಲೊಬ್ಬನಾದವನ ಭೂವಾಸ ಪ್ರಸಂಗ
೧೩. ಮೂರು ಜನ್ಮವೆತ್ತ ಅಂಬೆ
೧೪. ಗಂಗೆ ಮತ್ತು ಶಾಂತನು
೧೫. ಹಾವಾಗಿ ರಾಜನನ್ನು ಕಚ್ಚಿ ಕೊಂದ ಕ್ರಿಮಿ
ಪ್ರತಿ ಕತೆಯೂ ಭಿನ್ನ, ಕುತೂಹಲ ಮೂಡಿಸುವಂಥದ್ದು.
.
.
.
.
.
.
.
.
Read for life!
Comments
Post a Comment